ಶ್ರೀ ಬಿ.ಎಸ್. ಯಡಿಯೂರಪ್ಪ

ಮಾನ್ಯ ಮುಖ್ಯಮಂತ್ರಿಗಳು

ಕರ್ನಾಟಕ ಸರ್ಕಾರ

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಗ್ರಾ ಅ ಪಂ ರಾಜ್ )

ಕರ್ನಾಟಕ ಸರ್ಕಾರ

ಕೆ. ಎಸ್. ಈಶ್ವರಪ್ಪ

ಮಾನ್ಯ ಸಚಿವರು, ಗ್ರಾ ಅ ಪಂ ರಾಜ್

ಕರ್ನಾಟಕ ಸರ್ಕಾರ

ಕುರಿತು

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿ ಬರುವ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕಲ್ಪಿಸಿರುವ ಅವಕಾಶದಂತೆ ಸದರಿ ಇಲಾಖೆಗಳ ಸೇವೆಯಲ್ಲಿ ಶಾಶ್ವತ ವರ್ಗಾವಣೆ ಹೊಂದಲು ಇಚ್ಛೆ ಹೊಂದಿರುವವರು ಆನಲೈನ್ ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಭಿಮತ ವ್ಯಕ್ತಪಡಿಸುವ ಬಗ್ಗೆ

ಸರ್ಕಾರದ ಆದೇಶ

ನಿಮ್ಮ ಮಾಹಿತಿ ಈಗಾಗಲೇ ಭರ್ತಿ ಮಾಡಲಾಗಿದೆಯೇ ಎಂದು ಖಾತ್ರಿ ಮಾಡಿಕೊಳ್ಳಿ -

ವಿಶೇಷ ಸೂಚನೆ:

 • ಗ್ರಾ ಅ ಪಂ ರಾಜ್ ಇಲಾಖೆಯಲ್ಲಿ ವಿಲೀನಗೊಳ್ಳಲು ಇಚ್ಛೆ ಹೊಂದಿರುವ ಪ್ರತಿಯೊಬ್ಬರೂ ಎಲ್ಲಾ ವಿವರಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸತಕ್ಕದ್ದು
 • ಕನ್ನಡ ಮತ್ತು ಇಂಗ್ಲಿಷ್ - ಎರಡೂ ಭಾಷೆಯಲ್ಲಿ ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು . ನುಡಿ 6.0 ಅನ್ನು ಬಳಸಿ. ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
 • ಕನ್ನಡ ಭಾಷೆಯನ್ನು "ಯುನಿಕೋಡ್" ನಲ್ಲೆ ಭರ್ತಿ ಮಾಡಬೇಕಾಗಿದ್ದು, ಅದನ್ನು ಈ ಕೊಂಡಿಯ ಮೂಲಕ ಮಾಡಬಹುದು - ASCII to Unicode
 • ಮೊದಲನೆಯ ಕೆಜಿಐಡಿ ಸಂ., ಸೇವೆಗೆ ಸೇರಿದ ದಿನಾಂಕ, ನೇಮಕಾತಿ ಆದೇಶ ಸಂಖ್ಯೆ, ಪ್ರಸ್ತುತ ವೃಂದದಲ್ಲಿನ ಜೇಷ್ಠತಾ ಕ್ರಮಸಂಖ್ಯೆ, ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ, ವಿದ್ಯಾರ್ಹತೆ ಕುರಿತ ಮಾಹಿತಿ ಇತ್ಯಾದಿ ವಿವರಗಳನ್ನು ಅರ್ಜಿ ಭರ್ತಿ ಮಾಡಲು ಪ್ರಾರಂಭಿಸುವ ಮೊದಲು ನಿಮ್ಮ ಬಳಿ ಇರಿಸಿಕೊಳ್ಳಿ. ಅದೇ ರೀತಿ ನಿಮ್ಮ ಭಾವಚಿತ್ರ, ಸಹಿಗಳನ್ನು ಸಹ ಸಿದ್ಧಮಾಡಿಟ್ಟುಕೊಂಡಿರಿ. ಎಲ್ಲಾ ವಿವರಗಳ ಬಗ್ಗೆ ಮಾಹಿತಿ
 • ಎಲ್ಲಾ ವಿವರಗಳನ್ನು ಸೇವಾ ಪುಸ್ತಕದಲ್ಲಿ ಇರುವ ಮಾಹಿತಿಯಂತೆ ನೀಡತಕ್ಕದ್ದು
 • ನೀವು ನೀಡಿದ ಮಾಹಿತಿಗೆ ನೀವೇ ಸಂಪೂರ್ಣ ಜವಾಬ್ದಾರರು. ಆದ್ದರಿಂದ ಎಲ್ಲಾ ವಿವರಗಳನ್ನು ನಿಮ್ಮ ಬಳಿ ಇರಿಸಿಕೊಂಡ ನಂತರ ಅರ್ಜಿಯನ್ನು ತುಂಬುವುದು.

ವಿಶೇಷ ಸೂಚನೆ:

 • ಶಾಶ್ವತ ವರ್ಗಾವಣೆ ಹೊಂದಲು ಇಚ್ಛೆ ಹೊಂದಿರುವವರು ಮೊದಲಿಗೆ ಆನ್ ಲೈನ್ ನಲ್ಲಿ ನೋಂದಣಿ ಮಾಡಿ, ಲಾಗಿನ್ ಆಗಬೇಕು. ಅದರ ವಿವರಗಳನ್ನು ಕೆಳಗೆ ನೀಡಲಾಗಿದೆ. ನಿಮ್ಮ ಲಾಗಿನ್ ಮಾಹಿತಿಯನ್ನು ಜೋಪಾನವಾಗಿ ಇರಿಸಿಕೊಳ್ಳಿ
 • ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಎರಡೆರಡು ಬಾರಿ ಪರೀಕ್ಷಿಸಿ
 • ಈ ಸಲುವಾಗಿ, ಅರ್ಜಿಯನ್ನು ಸಲ್ಲಿಸುವ ಮೊದಲು, ಡ್ರಾಫ್ಟ್ ವೀಕ್ಷಿಸುವ ಸೌಲಭ್ಯವನ್ನು ನೀಡಲಾಗಿದೆ.
 • ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ನೀಡಲೇಬೇಕಾಗಿದ್ದು, ನಿಮ್ಮ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ. ನಿಮಗೆ ತಿಳಿದಿರುವ ಮಾಹಿತಿಯನ್ನು ಇತರರಿಗೆ ತಿಳಿಸಿ ಅವರಿಗೆ ಅರ್ಜಿಯನ್ನು ತುಂಬಲು ಸಹಾಯ ಮಾಡಿ
 • ನೀವು ಭರ್ತಿ ಮಾಡಿ ಸಲ್ಲಿಸುವ ಅರ್ಜಿ ನಮೂನೆಯ ಪ್ರತಿಯನ್ನು ನಿಮ್ಮ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.
 • ನೀವು ಭರ್ತಿ ಮಾಡಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ತಿದ್ದಬೇಕಾಗಿದ್ದಲ್ಲಿ, ಮತ್ತೊಮ್ಮೆ ಲಾಗಿನ್ ಆಗಿ, ನಿಮ್ಮ ಹಿಂದಿನ ಅಭಿಮತವನ್ನು ಸಂಪೂರ್ಣವಾಗಿ ಅಳಿಸಿ ( ಡಿಲೀಟ್ ಮಾಡಿ) ಹೊಸದಾಗಿ ಅರ್ಜಿಯನ್ನು ಸಲ್ಲಿಸಬೇಕು

ಗ್ರಾ ಅ ಪಂ ರಾಜ್ ಹುದ್ದೆಗಳ ವಿವರ - ಮಾಹಿತಿ ಇಲ್ಲಿ ವೀಕ್ಷಿಸಿ-

ಆಯ್ಕೆ ಸಲ್ಲಿಸುವುದು - ವೀಡಿಯೊ

ಆಯ್ಕೆ ಸಲ್ಲಿಸುವುದು - ಸಹಾಯ - ಸೂಚನೆ

  

ಅರ್ಜಿ ತುಂಬುವ ಮುನ್ನ ಕಡ್ಡಾಯವಾಗಿ ನಿಮ್ಮ ಬಳಿ ಇರಿಸಿಕೊಳ್ಳಬೇಕಾದ ಎಲ್ಲಾ ವಿವರಗಳ ಬಗ್ಗೆ ಮಾಹಿತಿಗಾಗಿ -

ಆಯ್ಕೆ ಸಲ್ಲಿಸುವುದು

ಉಲ್ಲೇಖಿತ ಅಧಿಸೂಚಗಳು ಮತ್ತು ಆದೇಶಗಳನ್ವಯ ( ಗ್ರಾ ಅ ಪಂ ರಾಜ್ ) ಪಂಚಾಯತ್ ರಾಜ್ ಎಂಜಿನಿಯರಿಂಗ್ / ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳಲ್ಲಿ ಶಾಶ್ವತ ವರ್ಗಾವಣೆ ಮೂಲಕ ನೇಮಕಾತಿ ಹೊಂದಲು ನನ್ನ ಅಭಿಮತ /ಇಚ್ಛಾ ಪತ್ರವನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ.

ಸಲ್ಲಿಕೆಗಾಗಿ ಆಯ್ಕೆಗಳು
(ಇಲಾಖೆಗಳು)

ಮೊದಲನೆಯ ಹೆಜ್ಜೆಯಾಗಿ ನಿಮ್ಮ ಆಯ್ಕೆಯನ್ನು ಗುರುತಿಸಿ

 • ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ
 • ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
 • ಎರಡೂ ಇಲಾಖೆಗಳ ಯಾವುದಾದರೂ ಸರಿ